ಶುಕ್ರವಾರ 21 ಜನವರೀ 2011
ಗುರುವಾರ 4 ಡಿಸೆಂಬರ್ 2008
ಮುತ್ತಿನೊಳಗಿನ ಬಿಂದು
ಕೆಂಪೆಲ್ಲ ಚೆಲ್ಲಿಹುದು ಪ್ರಕೃತಿಯ ಎದೆ ತುಂಬಾ
ಮಿಂದೆ ಮಾತಾ ಮಿಂದೆ ನಿನ್ನ ಎದೆಯಾಳದಲಿ
ಮಿಂದೆ ಕಂಡೆ ಮಾತಾ ಕಂಡೆ ,ನಿನ್ನ ಅಂತರಂಗವ ಕಂಡೆ
ಟೊಂಗೆಗಳ ನಡುವಿಂದ ಹಕ್ಕಿಗಳ ಝೇಂಕಾರ
ಸಂಗೀತ ಅಲೆಯಲಿ ಸಪ್ತ ನಾದಗಳ ಸಾಕಾರ
ಮಿಂದೆ ಮಾತಾ ಮಿಂದೆ ನಿನ್ನ ಎದೆಯಾಳದಲಿ ಮಿಂದೆ
ಗಿರಿಯ ಮೇಲಿಂದ ಜಲಧಾರೆಯ ಜಲಕಾರ
ಚಿಮ್ಮುತ್ತಿರೊ ಚಿಲುಮೆಯಲಿ ಕೆಂಪು ಭಾಸ್ಕರನ ಸಿಂಗಾರ
ಮಿಂದೆ ಮಾತಾ ಮಿಂದೆ ನಿನ್ನ ಎದೆಯಾಳದಲಿ ಮಿಂದೆ
ಕಂಡೆ ಮಾತಾ ಕಂಡೆ ,ನಿನ್ನ ಅಂತರಂಗವ ಕಂಡೆ
ತುಂತುರು ಮಳೆಯಿಂದ ತನ್ಮನ ತಂಪಾಗಿ
ಭುವಿಯೆಲ್ಲ ಕೆಂಪಾಗಿ ನಿನ್ನೊಳಗೆ ನಾನಾಗಿ
ಧನ್ಯ ತಾಯಿ ಧನ್ಯ ನನ್ನ ಅಂತರಾತ್ಮವು ಧನ್ಯ
ನಿತ್ಯ ತಾಯಿ ನಿತ್ಯ ನಿನ್ನ ಸಿರಿ ಬಾಳಿಗೆ ನಿತ್ಯ
ಲೇಖಕರು :ಚಾಣಾಕ್ಷ
ಕನ್ನಡಾಂಬೆ
ಮನದ ಹಣತೆ
ತಂಪಾದ ಮುಸುಕಿನಲಿ
ಹತ್ತಿಸು ದೀಪ ಹೃದಯ ಮಂದಿರ ದಲಿ
ಚೆಲ್ಲುತ್ತಾ ಉಷೆಯು
ಕರಗಿತು ನಿಶೆಯು
ಆರದೆ ಉರಿಯಲಿ ಕಾಣುತ ಬೆಳಗಲಿ
ಹಾದಿಯಲಿ ಮುಳ್ಳುಗಳು ಬೀದಿಯಲಿ ಕಲ್ಲುಗಳು
ಅಜ್ಞಾನ ಇರದು ಜಗದೊಳು
ಶಾಂತಿ ವನವ ಬೆಳಸಿ ಪ್ರೇಮ ಯುಗಕೆ ಹರಡಿ
ಸುಥೆಯ ಹರಿಸಿದೊಡೆ
ಅಂಥಕಾರವೆ ಇರದು ಈ ಭುವಿಯಲಿ
ಪ್ರಕೃತಿಯ ಮಡಿಲಲ್ಲಿ
ಶಶಿ ಶಿಶು ವಾದರು
ಪ್ರೀತಿ ಮನದಲ್ಲಿ ಪಶುವಾಗದಿರಲಿ
ಎಲೆಯ ಮೇಲೊಂದು ಹನಿಯು ನೀನಾಗಿ
ಕಿರಣವು ಸ್ವರ್ಶಿಸಿದೊಡೆ
ಮನವು ಮುತ್ತಾಗಲಿ ಮುತ್ತು ಚಿರವಾಗಲಿ
ತೈಲದ ಹಣತೆ
ಬದುಕಿನ ಮಮತೆ
ದೀಪದ ಸಾರ್ಥಕತೆಯಲಿ ಜೀವ ಜ್ಯೋತಿಯಾಗಲಿ
ದೀಪಾವಳಿ ಬಾಳ ಚೇತನವಾಗಲಿ
ಅದು ನಮ್ಮೆಲ್ಲರ ಉಸಿರಾಗಲಿ
ಲೇಖಕ:ಚಾಣಾಕ್ಷ
ಸೋಮವಾರ 1 ಡಿಸೆಂಬರ್ 2008
ನನ್ನ ಪ್ರಶ್ನೆಗೆ ನನ್ನದೇ ಉತ್ತರ
ದೇವರು ಇದ್ದಾನೆಯೇ ಎಂದು ತಿಳಿದುಕೊಳ್ಳುವ ಮೊದಲು ಇತಿಹಾಸದ ಕಡೆ ನೋಡೋಣ . ಪ್ರಕೃತಿಯಲ್ಲಿ ಸಂಭವಿಸುತ್ತಿದ್ದ ಗುಡುಗು ಮಿಂಜೂಗಳನ್ನು ಕಂಡ ಆದಿಮಾನವ ಅವುಗಳ ಬಗ್ಗೆ ಯೋಚಿಸತೊಡಗಿದ .ಅವನ ಯೋಚನಾ ಲಹರಿ ಸೀಮಿತವಾಗಿದ್ದರಿಂದ ಭಯಭೀತನಾದ . ಅವನು ಇವುಗಳ್ಳನ್ನು ಎದುರಿಸುವ ಸಲುವಾಗಿ ಪ್ರಾಧಿಸತೊಡಗಿರಬಹುದು .ನಂತರ ಮಾನವ ಸಂಘಟಿತರಾಗುತ್ತಾ ಹೋದಂತೆ ಪ್ರಕೃತಿಯ ವೈಶಿಷ್ಟ್ಯಗಳನ್ನು ಎದುರಿಸಲು ಅವನು ಕೆಲವು ಕಲ್ಲು ಗಳನ್ನು ಮರಗಳನ್ನು ಆಯ್ಕೆ ಮಾಡಿಕೊಂಡ .ಅವುಗಳನ್ನು ತನ್ನದೇ ಆದ ವಿಧಾನಗಳಿಂದ ಪೂಜಿಸುತ್ತಾ ಹೋದ. ಕಾಲ ಕಳೆದಂತೆ ,ಸಮಾಜ ಬದಲಾದಂತೆ ಆ ವಿಧಾನಗಳು ಬದಲಾಗುತ್ತಾ ಹೋದವು. ಒಂದು ಕಡೆ ನೆಲೆ ನಿಂತ ಮಾನವ ಮಾತು ಕಲಿತ . ತನ್ನ ಬಾವನೇ ಗಳನ್ನು ಹಂಚಿಕೊಳ್ಳಲು ಬರವಣಿಗೆಯ ಲಿಪಿ ಕಲಿತ. ಆಗ ತಾನು ನಂಬಿದ ಪ್ರೀತ್ರಾಚಿತ ನಂಬಿಕೆ ಗಳನ್ನು ಮುದ್ರಿಸ ತೊಡಗಿದ .ತಾನು ಅನುಭವಿಸಿದ ಘಟನೆಗಳನ್ನು ವಿವರಿಸ ತೊಡಗಿದ .ಸಮಾಜ ಬದಲಾಗುತ್ತಾ ಹೋದ ಹಾಗೆ ,ಆ ನಂಬಿಕೆಗಳು ಹಾಗೂ ಆಡು ಭಾಷೆಯು ತಲೆಮಾರಿನ ಕತೆಗಳು ವೈಭವಿಕರನಗೂಂಡು ಹಲವಾರು ಕತೆಗಳಾಗಿ ಒಬ್ಬ ವ್ಯಕ್ತಿ ಇಂದ ಇನ್ನೊಂದು ವ್ಯಕ್ತಿಗೆ ,ಒಂದು ತಲೆಮಾರಿನಿಂದ ಇನ್ನೊಂದುತಲೆಮಾರಿಗೆ ವೈಬವಿಕರಣ ವಾಗುತಲ್ಲೇ ಪ್ರಸಾರ ವಾಯಿತು.
ಹಾಗಾದರೆ ,ದೇವರು ಮಾನವನ ಸೃಷ್ಟಿಯೆ ? ಅಲ್ಲ ಅನ್ನುವುದಾದರೆ ದೇವರ ಸೃಷ್ಟಿ ಮಾನವನೇ ? ಎಂಬ ಪ್ರಶ್ನೆ ಗೆ ಉತ್ತರ ನಿಗೂಧ .ರಾಮ ಕೃಷ್ಣ ದೇವರೇ ? ರಾಮ ಒಬ್ಬ ಸತ್ಪೂರುಷ ಕೃಷ್ಣ ಒಬ್ಬ ಒಳ್ಳೇ ರಾಜಕಾರಣಿ ಆಗಿದ್ದರು .ಅವರ ಮೇಲಿರುವ ಕತೆಗಳನ್ನು ಮಾನವನೇ ಸೃಷ್ಟಿಸಿರಾ ಬೇಕು .ಏಕೆಂದರೆ ಎಲ್ಲ ದೇವರು ಮಾನವನೇ ಆಗಿದ್ದಾರೆ. ದೇವರನ್ನು ಮಾನವರ ರೂಪದಲ್ಲಿ ಕಂಡಿದ್ದಾರೆ. ನಂತರ ಕತೆಗಳು ವೈಬವಿ ಕಾರಣಗೊಂಡಂತೆ ಸಾಕು ಪ್ರಾಣಿಗಳು ಮತ್ತು ವೈಶಿಷ್ಟ್ಯ ಪ್ರಾಣಿಗಳ ರೂಪದಲ್ಲಿ ದೇವರನ್ನು ಕಾಣ ತೊಡಗಿದ .ದರ್ಮ ಎಂದರೇನು ?ಮನುಷ್ಯ ಹೀಗೆ ಬದುಕಬೇಕು , ಹೀಗೆಯೇ ಬಾಳ ಬೇಕು ಎಂಬುದರ ನಿಯಮ ಗ್ರಂಥ .ಮಾನವನು ಮಾಡುವ ತಪ್ಪು ಗಳನ್ನು ಸರಿ ದಾರಿಗೆ ತರುವ ಮತ್ತು ಶಾಂತಿ ನೆಲೆಸುವ ಉದ್ದೇಶಕ್ಕಾಗಿ ದರ್ಮದ ಮುಖಾಂತರ ಪಾಪ ಪ್ರಜ್ಞೆ ಉಂಟುಮಾಡಿ ಮಾನವನು ಹೀಗೆಯೇ ಬದುಕ ಬೇಕು ಎಂಬುದರ ತಿಳಿಸುವುದೇ ದರ್ಮ .ಅದಕ್ಕಾಗಿಯೇ ದೇವರು ಎಂಬುದರ ಕಲ್ಪನೆ ಮಾಡಿದರು.ಅಲ್ಲಾ,ಏಸು ,ಬುಧ್ಧ ಇವರೆಲ್ಲ ದೇವಸುತರು. ಅಂದರೆ ಒಬ್ಬ ವ್ಯಕ್ತಿಯಲಿ ಇರುವಂತಹ ಸಡ್ಗುಣ ಅಂಶಗಳು ಪ್ರಬಾವಿತವಾಗಿ ಆತನಲ್ಲಿ ದೇವರ ಗುಣ .ಅಂದರೆ ತಾನು ಅಂದುಕೊಂಡಿರುವ ಗುಣ ಆತನಲ್ಲಿ ಇರುವುದರಿಂದ ಅವನಲ್ಲಿ ದೇವರನ್ನು ಕಂಡಿರಾ ಬೇಕು. ಹಾಗಾದರೆ ದೇವರು ಇಲ್ಲವೇ ,ಇಲ್ಲ ಅನ್ನುವುದಾದರೆ ದೇವರು ಎಂಬ ಕಲ್ಪನೆ ಯ ಬಗ್ಗೆ ಯೋಚನೆ ಮಾಡೋಣ .ಮಾನವ ಮಾನವನ ನಡುವೆ ಸಂಪರ್ಕಗಳು ಇಲ್ಲದೇ ಇದ್ದ ಸಮಯದಲ್ಲಿಎಲ್ಲಾ ಆದಿವಾಸಿಗಳಲ್ಲೂ ಏಕರುಪಾ ವಾಗಿ,ವಿಶ್ವದ ಯಾವುದೇ ಮೂಲೆಯಲ್ಲಿ ನೋಡಿದರು ಮಾನವನ ಅಂತಾರಾಳದಲಿ ದೇವರು ಎಂಬ ಕಲ್ಪನೆ ಇದೆ .ಆದರೆ ವಿಧಾನಗಳಲ್ಲಿ , ಅಚರಣೆಗಳಲ್ಲಿ ವ್ಯಾತ್ಯಾಸ ವಿರಬಹುದು .ಆದರೆ ಯಾವುದು ಶಕ್ತಿ ಇದೆ ಎಂದು ಎಲ್ಲ ಮಾನವನ ಭಾವನೆ ಗಳಲ್ಲಿ ಭಾವನೆ ಗಳಲ್ಲಿ ಏಕರೂಪತೆ ಇದೆ. ಮಾನವ ಮುಂದೆ ಏನಾಗುತ್ತದೆ ಎಂದು ತಿಳಿಯುವ ಶಕ್ತಿ ಇದ್ದಿದ್ದರೆ ಅವನು ದೇವರ ಕಲ್ಪನೆಯೇ ಮಾಡುತ್ತಿರಲಿಲ್ಲ ಎಂಬುದು ನನ್ನ ಅನಿಸಿಕೆ .ಒಬ್ಬ ವ್ಯಕ್ತಿ ಈ ಜಗತ್ತಿಗೆ ಪ್ರವೇಶಿಸಿದಾಗ ತನ್ನ ಸುತ್ತಮುತ್ತಲ ಸಮಾಜವನ್ನು ನೋಡಿದಾಗ ಸಾಮನ್ಯವಾಗಿ ಯೋಚನೆ ಮಾಡುವುದು ಸತ್ತ . ವ್ಯಕ್ತಿ ಎಲ್ಲಿ ಹೋಗುತ್ತಾನೆ .ಈ ಜೀವ ಎಲ್ಲಿಗೆ ಹೋಗುತ್ತದೆ .?
ಏಕೆ ಹೋಗುತ್ತದೆ ಇದು ನಮ್ಮಲ್ಲಿಯೇ ಏಕೆ ಇರಬಾರದು .ಮುಂತಾದ ಪ್ರಶ್ನೆಗಳು ಕಾಡತೊಡಗುತ್ತದೆ. ಜೀವ ಇರುವಾಗ ನಮೆಲ್ಲರಾ ಜೊತೆ ಕ್ರಿಯಾಶೀಲನಾಗಿದ್ದು ,ಬೆಂಕಿ ತಗುಲಿದರೂ ನೋವಿನಿಂದ ಒಡ್ಡಾಡುವ ವ್ಯಕ್ತಿ ಸತ್ತ ಮೇಲೆ ಇಡೀ ದೇಹ ಬೆಂಕಿ ಯಲ್ಲಿ ಹಾಕಿದರು ಏನಾಗುವುದಿಲ್ಲ ಏಕೆ ಇಂತಹ ಹಲವಾರು ಪ್ರಶ್ನೆಗಳಿಗೆ ಉತ್ತರ ಸಿಗದ್ದಿದ್ದಾಗ ಯಾವುದೂ ಒಂದು ಶಕ್ತಿ ಇದೆ .ಎಂಬ ನಂಬಿಕೆ ಬಲವಾಗುತ್ತೆ . ನಾಸ್ತಿಕ ಅದವನು ದೇವರೆಂಬ ಕಲ್ಪನೆ ಸುಳ್ಳು .ಈ ಪ್ರಪಂಚದ ನಿಗೂದ ರಹಸ್ಯಗಳೆಲ್ಲ ಪ್ರಕೃತಿಯ ನಿಯಮ ಎನ್ನುತ್ತಾರೆ .ಈ ಪ್ರಕೃತಿಯ ನಿಯಮದ ರಚನಕಾರರು ಯಾರು .ಸೂತ್ರದಾರ ಯಾರು ?ಒಂದು ವಿಶಾಲವಾದ ನೋಟದಲ್ಲಿ ನೋಡುವದಾದರೋ ನಾಸ್ತಿಕರು ಕೂಡ ಯಾವುದೋ ಒಂದು ಶಕ್ತಿ ಇದೆಯೆಂದು ನಂಬುತ್ತಾರೆ .ಅದನ್ನು ಪ್ರಕೃತಿ ಎನ್ನುತ್ತಾರೆ .ಹಿಂದೂಗಳು ರಾಮ ಕೃಷ್ಣ ಎನ್ನುತ್ತಾರೆ. ಮುಸ್ಲಿಮ್ ಅಲ್ಲಾ , ಕ್ರಿಸ್ತರು ಏಸು ಎನ್ನುತ್ತಾರೆ .ನನ್ನ ಪ್ರಕಾರ ಯಾವೋದು ಒಂದು ಶಕ್ತಿ ನಮ್ಮೆಲ್ಲರ ಮೇಲೆ ಹಿಡಿತ ಹೊಂದಿದೆ .ಆದರೆ ಈಗಿರುವ ದೇವರುಗಳಲ್ಲಾ ಮಾನವನ ಸೃಷ್ಟಿಯೆ ಇರಬೇಕು .ನನ್ನ ಪ್ರಕಾರ ದೇವರು ಎಂದರೆ ಯಾವುದೋ ಅಗೋಚರ ಶಕ್ತಿ ,ಸನಾತನ ದರ್ಮ ವಾದ ಹಿಂದೂ ದರ್ಮದಲ್ಲಿ ದೇವರ ಅಮೂರ್ತ ಕಲ್ಪನೆಯ ಬಗ್ಗೆ ವೇದಗಳಲ್ಲಿ ಉಲ್ಲೇಖವಾಗಿದೆ.ಅಂದಿನ ಜ್ಞಾನಿಗಳು ,ಋಷಿಗಳು, ಅಂತರಂಗವಾಗಿ ದೇವರ ಸುಖವನ್ನು ಅನುಭವಿಸಿದ್ದಾರೆ. ಮಾನಸಿಕವಾಗಿ ಸಂತೋಷವನ್ನುಂಟು ಮಾಡುವ ಶಕ್ತಿಯೇ ದೇವರು ..ಆಚರಣೆಗಳು ,ಕಥೆಗಳು ,ನಂಬಿಕೆಗಳು ಮಾನವನ ಕೊಡುಗೆ ಎನ್ನಬಹುದು ಮಾನವ ಜಗತ್ತಿನ ರಹಸ್ಯಗಳ ಕಾರಣ ಏನೆಂದು ಹೇಳಬಹುದೇ ಹೊರತು ,ಏನ್ನನ್ನೂ ಸೃಷ್ಟಿಸಲು ಸಾದ್ಯವಿಲ್ಲ .ಈ ಸೃಷ್ಟಿ ಹಿಂದೆ ಒಬ್ಬ ಸೃಷ್ಟಿಕರ್ತ ಇರಬಹುದು ಎಂಬುದು ನನ್ನ ಅನಿಸಿಕೆ .ಅವನೆ ನನ್ನ ಪ್ರಕಾರ ದೇವರು
ಗುರುವಾರ 8 ಮೆ 2008
ನಲ್ಮೆಯ ಗೆಳೆಯರೇ
blockquote>ಅಸ್ಠಿರಂ ಜೀವನ ನೌಕೆ ಅಸ್ಠಿರಂ ಧನ ಯೌವನಂ ಅಸ್ಠಿರಂ ದಾನ ಪುತ್ರಾದಿ ಧರ್ಮ ಕೀರ್ತಿದ್ವಯ ಸ್ಠಿರಂ
ನನ್ನ ಪ್ರಿಯ ಓದುಗರೆ
ನನ್ನ ಬಗ್ಗೆ
- N.SATHISH
- ಬೆಂಗಳೂರು, ಕರ್ನಾಟಕ, India
- nick name:mr.chanaksha email:sathish_charya@rediffmail.com supu,hani,chandu,devaraja,mahesha,karyappa,prasadha,kandha,gayi ,sunil jeevanadalli athmiya snehitaru
